Haleya varsavu hoyitu Song Lyrics
ಹಳೆಯ ವರ್ಷವು ಕಳೆದು ಹೋಯಿತು
ನೂತನ ವರ್ಷವು ಉದಯವಾಯಿತು
ಹೊಸ ಹಾಡನ್ನು ಹಾಡಿ ಕೊಂಡಾಡುವ
ಕರ್ತನ ಕೃಪೆಯನ್ನು ಹಾಡುತ್ತಾ ಸ್ತುತಿ ಮಾಡುವ
ಹ್ಯಾಪಿ ನ್ಯೂ ಇರ್
ಬ್ಲೆಸ್ಸ್ಡ್ ನ್ಯೂ ಇರ್
ಹ್ಯಾಪಿ ನ್ಯೂ ಇರ್
ಇನ್ ದ ನೇಮ್ ಆಫ್ ಜೀಸಸ್
1.ಉತ್ತಮವಾದ ಗೋದಿ ಯಿಂದಲೇ ನಿನ್ನನ್ನು ಪೋಷಿಸುವನು
ಬಂಡೆ ಯೊಳಗಿನ ಜೇನಿನಿಂದಲೇ
ನಿನ್ನನ್ನು ತೃಪ್ತಿಪಡಿಸುವನು
ನಿನ್ನ ನಂಬಿಕೆಯೇ ಲೋಕ ಜಯಿಸುವುದು ಈ ವಾಗ್ದಾನ ನೆರವೇರ್ವದು – ಹ್ಯಾಪಿ
2.ನೂತನ ವರ್ಷವನ್ನು ಸುಬಿಕ್ಷೆಯಿಂದಲೇ ತುಂಬಿಸಿ ಸಂತೋಷಿಸುವ
ನಿನ್ನಯ ಮಾರ್ಗವೆಲ್ಲಾ ಸಮೃದ್ಧಿ ಕರವಾದ ವೃಷ್ಟಿಯನ್ನು ಸುರಿಸುವನು
ನಿನ್ನ ನಂಬಿಕೆಯೇ ಲೋಕ ಜಯಿಸುವುದು ಈ ವಾಗ್ದಾನ ನೆರವೇರ್ವದು – ಹ್ಯಾಪಿ
3.ದುಃಖದ ಮುಖದಲ್ಲಿ ಕಾಣ್ಣಿರ ಹನಿಗಳನ್ನು ಯೇಸು ಓರೆಸುವನು
ನಿನಗುಂಟಾದ ನಿಂದೆ ಅವಮಾನ ಭೂಮಿಯಿಂದ ತೊಲಗಿಸುವ
ನಿನ್ನ ನಂಬಿಕೆಯೇ ಲೋಕ ಜಯಿಸುವುದು ಈ ವಾಗ್ದಾನ ನೆರವೇರ್ವದು – ಹ್ಯಾಪಿ
4.ನಿನ್ನನ್ನು ಹೊರುವನು ನಿನ್ನನ್ನು ಸಹಿಸುವನು ಯೇಸು ನಿನ್ನ ಗುಣಪಡಿಸುವ
ಕರ್ತನು ನಿನ್ನ ಜೊತೆಯೆ ನಿಂತು ಯುದ್ಧ ಮಾಡಿ ಜಯನೀಡುವ
ನಿನ್ನ ನಂಬಿಕೆಯೇ ಲೋಕ ಜಯಿಸುವುದು ನಿನ್ ವಾಗ್ದಾನ ನೆರವೇರ್ವದು – ಹ್ಯಾಪಿ