Harsisu nalidadu magane bhayabeda Song Lyrics
ಹರ್ಷಿಸು ನಲಿದಾಡು ಮಗನೇ ಭಯಬೇಡ
ಹರ್ಷಿಸು ನಲಿದಾಡು ಮಗಳೇ ಭಯಬೇಡ
ಮಹೋನ್ನತನೇಸು ನಿನ್ನಡುವೇ
ಮಹಾದೊಡ್ಡ ಕಾರ್ಯಮಾಡುವನು (2) (ಹರ್ಷಿಸು ನಲಿದಾಡು)
1.ಅಗತ್ಯವ ನೆನೆಸಿ ಕೊರಗಿದಿರು ಕರ್ತನ ನೋಡಿ ಸ್ತುತಿಸುತ್ತಿರು (2)
ಸ್ವಲ್ಪವ ಕಂಡು ಸೊರಗದಿರು ಸಕಲವ ಕೊಡುವನು ಕೊಂಡಾಡು (2) (ಹರ್ಷಿಸಿ ನಲಿದಾಡು)
2.ಆತನ ಸ್ತುತಿಸಿ ನೀ ಹಾಡು ಅದುವೇ ನಿನಗೆ ಸೇಫ್ ಗಾರ್ಡು(2)
ತಪ್ಪದೇ ಹರುಷದಿ ಮಾತಾಡು ಸುಖವಾಗಿ ಬಾಳುವೆ ನೀ ನೋಡು (2) (ಹರ್ಷಿಸಿ ನಲಿದಾಡು)
3.ಮೀನಿನ ಹೊಟ್ಟೆಯಲ್ಲಿ ಯೋನನಂತೆ ಕುಗ್ಗಿ- ತಗ್ಗಿ ಹೋಗಿದಿಯೋ (2)
ಅರ್ಪಿಸು ಸ್ತುತಿಬಲಿ ಶಬ್ದದಿಂದ ಅಗಲುವುದೆಲ್ಲ ಲಜ್ಜೆಯಿಂದ (2) (ಹರ್ಷಿಸಿ ನಲಿದಾಡು)
4.ಸ್ಥಿರವಾದ ಪಟ್ಟಣ ಇಲ್ಲಿಲ್ಲ ಬರಲಿರುವುದನ್ನೇ ಬಯಸುವೆವು (2)
ಯೇಸುವಿಗೆ ಘನತೆ ಸ್ತೋತ್ರ ಬಲಿ ಇಂದಿಗೂ ಎಂದಿಗೂ ಸಲ್ಲಿಸುವ (2) (ಹರ್ಷಿಸಿ ನಲಿದಾಡು) (ಮಹೋನ್ನತನೇಸು)