Hasiru hullu gavalalli tangisuvavane Song Lyrics
ಹಸಿರು ಹುಲ್ಲುಗಾವಲಲ್ಲಿ ತಂಗಿಸುವವನೆ,
ಶಾಂತವಾದ ನೀರ ಬಳಿ ಕರೆ ತರುವವನೆ (೨),
ನನ್ ಕುರುಬನೆ, ನನ್ ಯೇಸುವೆ, ನನಗೇನು ಕೊರತೆ ಇಲ್ಲಪ್ಪ (೨), (ಹಸಿರು ಹುಲ್ಲು )
1. ಕೈಗಳಲ್ಲಿ ಎತ್ತಿಕೊಂಡು ಹೊತ್ತು ಸಾಗುವೆ, ಮರೆತು ಬಿಡದೆ ಆಹಾರ ಫಲ ನೀಡುವೆ (೨) (ನನ್ ಕುರುಬನೆ)
2. ಹೊಸ ಜೀವ ದಿನ ದಿನ ನನಗೆ ನೀಡುವೆ, ಪರಿಶುದ್ಧ ಮಾರ್ಗದಲ್ಲಿ ನನ್ನ ನಡೆಸುವೆ (೨) (ನನ್ ಕುರುಬನೆ)
3. ಜೀವವುಳ್ಳ ದಿನವೆಲ್ಲ ಶುಭ ಕೃಪೆಯು ನನ್ನನ್ನು ಹಿಂಬಾಲಿಸಿ ಬರುತ್ತಿರುವುದು (೨) (ನನ್ ಕುರುಬನೆ)